ಸೋಮವಾರ, ಅಕ್ಟೋಬರ್ 1, 2012

ನೀವು ಶಿಕಾರಿ ಹುಳ ನೋಡಿದ್ದಿರಾ?




ನೀವು ಶಿಕಾರಿ ಹುಳ  ನೋಡಿದ್ದಿರಾ?
ಶಿಕಾರಿ ಕೇಳಿರಬಹುದು, ಆದರೆ  ಶಿಕಾರಿ ಹುಳ ಅನ್ನೂ ಪದ ಪರಿಚಯ ಇರಲಿಕ್ಕಿಲ್ಲ.  ಅದನ್ನು ಇಂಗ್ಲೀಷ್ ನಲ್ಲಿ   ಗ್ರಾಸ್ ಹಾಪರ್ ಅಂಥ ಕರಿತಾರೆ. ನಿಜವಾದ ಕನ್ನಡದ ಹೆಸರು ಮಿಡತೆ. ನಮ್ಮ ಮಲೆನಾಡಲ್ಲಿ  ಹಸಿರು ಮತ್ತು ಕಂಧು ಬಣ್ಣದಲ್ಲಿ ಇರುತ್ತದೆ. ನಮ್ಮಮಲೆನಾಡು ಜನ ಇದನ್ನ  ಶಿಕಾರಿ ಹುಳ ಅಂಥ ಕರಿಯೋಕೆ ಒಂದು  ಕಾರಣ ಇದೆ.ಮಲೆನಾಡಲ್ಲಿ  ಈ ಹುಳು ರಾತ್ರಿ ಮನೆಗೆ ಬಂದರೆ ಶಿಕಾರಿ ಆಗುವ ಸೂಚನೆ ಯಂತೆ.ಒಂದು ನಂಬಿಕೆ.ಯಾವ ಆಧಾರವು ಇಲ್ಲ . ಪ್ರಾಯಶ ರಾತ್ರಿ  ಶಿಕಾರಿಗೆ ಹೋಗು  ಒಂದು ಕುಂಟುನೆಪ ಅಥವಾ ಪ್ರಾಣಿ ಬೇಟೆ ಆಗುತ್ತೆ ಅನ್ನೋ ಒಂದು ಪೊಸಿಟಿವ್ ಯೋಚನೆ.

ಸಾಮಾನ್ಯವಾಗಿ  ವಸ್ತು ಲಕ್ಷಣದ  ಮೇಲೆ ಹೆಸರಿಡೋದು  ಸಹಜ  ಆದರೆ ನಮ್ಮ ಮಲೆನಾಡುಜನ ಇಟ್ಟಿರೋ ಹೆಸರಿಗೂ ಹುಳಕ್ಕು ಸಂಭದವೆ ಇಲ್ಲ .ಹಸಿರು ಹುಲ್ಲಿನ ಮೇಲೆ ಕುಪ್ಪಳಿಸುವ ಇದಕ್ಕೆ ವಿದೇಶಿಯರು   ಗ್ರಾಸ್ ಹಾಪರ್  ಅಂಥ ಕರೆಯುತ್ತಾರೆ.   ವಿದೇಶಿಯರು ಇಂಥ ಕೆಲಸದಲ್ಲಿ  ಬುದ್ದಿವಂತರು.ಮೈಕಲ್  ಚಪ್ಪಲಿ ಹೊಲಿದರೆ   ಮೈಕಲ್  ಶೂ ಮೇಕರ್ ಅಂದುಬಿಡುತ್ತಾರೆ  , 
ಸ್ಮಿತ್  ಬಂಗಾರದ ಕೆಲಸ ಮಾಡಿದರೆ   ಗೋಲ್ಡ್ ಸ್ಮಿತ್  ಅವನೇ ಲಾಸ್ ಆಗಿ  ಕಬ್ಬಿಣದ ಕೆಲಸ ಶುರುಮಾಡಿದರೆ   ಬ್ಲಾಕ್  ಸ್ಮಿತ್  ಅಂದು ಬೆಜಾರಿಲ್ಲದೆ ಕರಿತಾರೆ .  ಒಟ್ಟಿನಲ್ಲಿ  ಸುಲಬ ಸರಳ ಸಲೀಸು ಅವರ ಮಂತ್ರ . 

ಆದರೆ ನಾವು ಹಾಗಲ್ಲ,  ಪರಿಸರದ ಸಣ್ಣ ಹುಳು ನಮ್ಮ  ಜಾನ ಪದ ಕಥೆಗೋ ಅಥವಾ ಮೂಡ ನಂಬಿಕೆಗೋ ಸಂಭಂದ ಕಟ್ಟಿ ಅದಕ್ಕೊಂದು ಪ್ರಾಮುಕ್ಯತೆ ಕೊಟ್ಟು ಬಿಡುತ್ತೇವೆ. ನಮ್ಮ ಹಳ್ಳಿಗರು ಈ ಹುಳಕ್ಕೆ ನಿಕ್ ನೇಮ್   ಇಟ್ಟಿರುವುದು ನಿಜ.
ನಮಗೆ ಗೊತ್ತಿರುವ ಹಾಗೆ ಸಂಜೆ ಮನೆಯ ಅಂಗಳದ ಲೈಟು  ಬೆಳಕಿಗೆ ಈ ತಿಳಿ ಹಸಿರು ಬಣ್ಣದ ಹುಳಗಳು ಹಾರಿ ಬರುತ್ತಿದ್ದವು. ನಾವು ಚಿಕ್ಕವರಿದ್ದಾಗ  ಸಂಜೆ ಹೂಂ ವರ್ಕ್  ಮಾಡುತ್ತಾ ಜಗಲಿಯ ಲೈಟು ಕೆಳಗೆ ಕುಳಿತು ಪುಸ್ತಕ ಹರಡಿ ಓದುವಾಗ ಮನಸ್ಸು ಇಂಥಹ ವಿಸ್ಮಯಗಳ ಹಿಂದೆ ಸಾಗುತ್ತಿತ್ತು . ಸಾದಾರಣವಾಗಿ  ಹಳ್ಳಿ ಮನೆಯ ಲೈಟು   ಬೆಳಕಿಗೆ, ಪಕ್ಕದ ಕಾಡು ಗದ್ದೆ ಗಳಿಂದ  ಹುಳಗಳು ಹಾರಿಬಂದು ಲೈಟು ಸುತ್ತಿ ಕಾಲು, ಬಾಲ , ರೆಕ್ಕೆ ಸುಟ್ಟು ಬೀಳುತ್ತಿದ್ದವು. ಹಲ್ಲಿಗಳು ಇವನ್ನು ತಿನ್ನಲೆಂದು ಹೊಂಚು ಹಾಕುತ್ತಿದ್ದವು . ಅದುನಮಗೆ ಸಾಮಾನ್ಯ ವಾಗಿತ್ತು.
ಆದ್ರೆ , ಈ ಮಿಡತೆ ಮಾತ್ರ ನಮ್ಮ ಗಮನ ಸೆಳೆಯುತ್ತಿತ್ತು . ಇವು ಬರುವುದು ಅಪರೂಪ. ಸೃಷ್ಟಿ ಯಲ್ಲೂ  ವಿಬಿನ್ನ, ದೇವರು ಹಸಿರು ತೆಂಗಿನ ಕಡ್ಡಿ ಗಳನ್ನು ಆಯ್ದು  ಇವನ್ನು ಸೃಷ್ಟಿ ಸಿದನೇನೋ ಅನ್ನಿಸುತ್ತೆ. ಪಕ್ಕಾ ಸ್ಲಿಮ್ ಆಗಿರುವ ಈ ಹುಳದ್ದು   ನೀಳ ವಾದ ಅಸಿರು  ರೆಕ್ಕೆ ಮತ್ತು  ಸುಂದರ ವಿನ್ಯಾಸ. ಹೋಲಿಸಲೇ ಬೇಕು ಎನ್ನೋ ದಾದ್ರೆ , ತುಂಬ ತೆಳ್ಳಗಿನ ಸುಂದರಿಗೆ ಒಂದು ಉದ್ದನೆಯ ಹಸಿರು ಲಂಗ ತೊಡಿಸಿದಂತೆ. ನಿಲ್ಲುವ ಬಂಗಿ ಮುಖ ವಿನ್ಯಾಸ ಥಿಯೇತ್ ಕುದುರೆಯಂತೆ. ಕೆಲವುಕಡೆ ಕುದುರೆ ಹುಳ ಅಂಥ ಕರಿಯೋ ನೆನಪು.   ಇನ್ನೂ  ವಿಸ್ಮಯ ಎಂದರೆ  ಇದರ ದೇಹ ರಚನೆ ಯನ್ನು ಮಾದರಿಯಾಗಿ ಇಟ್ಟುಕೊಂಡು ಕೆಲವು  ರೋಬೊ ತಯಾರಿಸಿ ಮಂಗಳದಂಥಹ ಗ್ರಹದ ಮೇಲೆ ಪ್ರಯೂಗಿಸಿರಭಹುದು. ಮಾನವ ಕಂಡುಹಿಡಿದೆ ಎಂದು  ಹೇಳುವ ಎಲ್ಲವು ಸೃಷ್ಟಿಯ ಮೂಲ ರೂಪು ರೇಷೆ ಗಳನ್ನು ಹೊಂದಿರುತ್ತದೆ. 
ಕಾಲ ಕ್ರಮೇಣ ಶಿಕಾರಿ ಜೋತೆಗೆ  ನಂಬಿಕೆಯು ನಶಿಸಿ ಹೋಯಿತು.ಅದೆಲ್ಲ ಬದಿಗಿಟ್ಟು ನೋಡುವುದಾದರೆ   ಸೃಷ್ಟಿಯ ಒಂದು ಸಣ್ಣ  ತುಣುಕು  ವಿಜ್ಞಾನಕ್ಕೂ, ನಂಬಿಕೆಗೂ ಮತ್ತು ವಿಸ್ಮಯಕ್ಕು  ತಾಳೆ ಹೊಂದುವುದು ಸೋಜಿಗವಲ್ಲವೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ